Author: ಶ್ರೀವತ್ಸ ಜೋಷಿ, ಖ್ಯಾತ ಅಂಕಣಕಾರರು, ವಾಷಿಂಗ್ಟನ್ ಡಿ.ಸಿ
ನೂಪುರ ಭ್ರಮರಿಗೀಗ ತುಂಬಿತು ಹತ್ತು
ಸಾರ್ಥಕ್ಯಭಾವದಲಿ ಮಿಂದ ಹೊತ್ತು
ಕಲಾಪೋಷಣೆಯದೂ ಒಂದು ಗತ್ತು
ಹೊಳೆವಂತೆ ಮೂಗಿನ ಮೇಲೆ ನತ್ತು
ಸಂಸ್ಕೃತಿ ಸಂಸ್ಕಾರಗಳ ಬೀಜ ಬಿತ್ತು
ಫಲವತ್ತಾಗಿಸು ಹೃದಯ ಹದವಾಗಿ ಉತ್ತು
ಮೌಲ್ಯಗಳ ರಕ್ಷಣೆಗೆ ಸದಾ ಕೈ ಎತ್ತು
ಕಲೆಯ ಕಳೆಯೇರಿಸು ತನುಮನವನಿತ್ತು