ಅಂಕಣಗಳು

Subscribe


 

‘ನೂಪುರ’ದಿಂದ ಗುಣಾವಗುಣಗಳ ಪರಿಮಾಣ ಗಣನೆ ಸಾಧ್ಯ

Posted On: Monday, September 29th, 2014
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ನೂಪುರ ಮಾನ್ಯೆಗೆ ! ನೂಪುರದ ಕಳೆದ ಸಂಚಿಕೆಯಲ್ಲಿ ಜುಲೈ-ಆಗಸ್ಟ್ ಮಧ್ಯಭಾಗದ ಸಂಚಿಕೆ ಪ್ರಕಟವಾಗಿಲ್ಲವೆಂಬ ನೋವು ತೋರಿಸಿದಿರಿ. ಚಿಂತಿಲ್ಲ, ಹೆಚ್ಚು ಕಡಮೆ- ಹಿಂದು ಮುಂದು ಯಾರಿಂದಲೂ ಸಾಗುವುದು ಸಾಮಾನ್ಯ ಸಂಗತಿ. ಆದರೂ ಗಿಣಿಗಿಣಿಸುತ್ತಿದೆ ನೂಪುರ. ಅಕ್ಷರ ಚಿಕ್ಕದಾದರೂ ಚೊಕ್ಕದಾಗಿರುವ 13 ಲೇಖನಗಳು ಸ್ಮರಣೀಯವಾಗಿದ್ದವು. ಕೃತಜ್ಞತೆಗಳ ಋಣಗಳನ್ನರ್ಪಿಸಿರುವೆನು.

ಮಾಸ್ಟರ್ ವಿಠಲ್, ಹಿರಿಯ ನೃತ್ಯಗುರು, ಮಂಗಳೂರು

ಅಚ್ಚರಿಯ ಆಗರವೇ ಆಗಿ ಹೊಚ್ಚಹೊಸದಾದ ನರ್ತನ ಜಗತ್ತಿನ ಸುತ್ತಮುತ್ತ ಸುಳಿದು ಕಲೆಹಾಕಿ ಹೊಸದಾದ ಹಲವಾರು ಆಯಾಮಗಳಿಗೆ ತಾಯಿಮನೆಯಾಗಿ ಕಾಣಿಸಿಕೊಂಡದ್ದು ನೂಪುರ ಭ್ರಮರಿ. ಆರಮ್ಭದ ನುಡಿನಮನ ಅಂಜಲಿಯಲ್ಲಿ ಕಂಡುಬಂದ ಹಿರಿಯ ವಿದ್ವಾಂಸ, ಕನ್ನಡ ಪಂಡಿತರೆಂದೇ ಪ್ರಸಿದ್ಧಿಯ ತುದಿಯನ್ನೇರಿದ ಯಕ್ಷಗಾನ ಸಾಹಿತಿ ಪೆರ್ಲಕೃಷ್ಣಭಟ್ ಹಾಗೂ ಯಕ್ಷಗಾನ ಕಲೆಯ ಇನ್ನೊಂದು ಮಜಲಾದ ಬಯಲಾಟದ ‘ಬಣ್ಣ’ಗಾರಿಕೆಯಲ್ಲಿ ಪ್ರಸಿದ್ಧಿ ಹೊಂದಿದ ಪಕಳಕುಂಜ ಕೃಷ್ಣನಾಯ್ಕ ಇವರಿಬ್ಬರ ಭಾವಚಿತ್ರಗಳು ಪಕ್ಕನೆ ಪುಟ ತಿರುವಿಸಿಕೊಳ್ಳಲು ಅನುಮತಿ ನೀಡದಾಯಿತು. ಪುಟ ಮೊಗಚಿಕೊಂಡು ಹೋದಂತೆಯೇ ಈ ಸಲದ ಸಂಚಿಕೆಯ ಪ್ರತಿ ಅಂಕಣಗಳಲ್ಲಿಯೂ ಹೊಸ ಆಯಾಮಗಳೇ ಇದ್ದವು. ಪ್ರತಿಯೊಂದು ಬರೆಹಗಳೂ ಚರ್ಚಾವೇದಿಕೆಯಾಗಿಯೇ ಕಾಣಿಸಿಕೊಂಡಿದೆಯೆಂದು ನನ್ನ ಅನಿಸಿಕೆ. ವಾದ-ಪ್ರತಿವಾದಗಳು ನಡೆದರೇನೇ ಬರಹಗಾರರಿಗೂ ಓದುಗ ನೋಡುಗರಿಗೂ ಪತ್ರಿಕೆಯತ್ತ ದೃಷ್ಟಿ ಹರಿಸಲು, ವಿಷಯಮಂಡನೆಯಲ್ಲಿ ಗುಣಾವಗುಣಗಳ ಪರಿಮಾಣ ಗಣನೆಗೆ ತಂದುಕೊಳ್ಳಲು ಸಾಧ್ಯ. ಇದು ನಿಜಕ್ಕೂ ಕಲೆಯ ಹೆಚ್ಚುಗಾರಿಕೆಗೆ ಪತ್ರಿಕೆಯ ಬಳಗದವರಿಂದ ನೀಡಲ್ಪಟ್ಟ ಕೊಡುಗೆ ಎಂದೆನಿಸಿತು. ಪತ್ರಿಕೆ ಆ ದೃಷ್ಟಿಯಲ್ಲಿಯೇ ಮುಂದೆ ಹೆಜ್ಜೆ ಇಡಲಿ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಸಾಧನೆ ಮುಂದುವರಿಯಲಿ.

ಅಕ್ಷರಾಭ್ಯಾಸವಿಲ್ಲದ ಕಲಾವಿದನೊಬ್ಬ
ನಿದ್ದರದು ಏನಂತೆ ಯಕ್ಷಗಾನದಲಿ ?
ಅಕ್ಷರಕ್ರಾಂತಿಯನು ಬೆಳೆಸಿಕೊಳ್ಳುವ ನವ್ಯ
ಕ್ರಾಂತಿಯೇ ಆಗಿಹುದು ಯಕ್ಷಗಾನವೇ ಸೈ ||

ನಿರತವೀ ಕಾಯಕದಿ ಸತತ ಯತ್ನವ ಮಾಡೆ
ಅಳಿಸಿ ಹೋಗಲು ಸಾಧ್ಯ ನಿರಕ್ಷರದ ಭಾವ
ಬನ್ನಿ ಈ ಗಾನಸವಿ ಉಣ್ಣುತ್ತ ಹೋಗೋಣ
ಎನ್ನುತ್ತಲೇ ನಡೆಮುಂದೆ, ಬನ್ನ ಪಡಬೇಡ ||

ಶಿಖರವೇರುವ ಛಲದಿ ಮುಖಮುಖವ ನೋಡುತ್ತ
ಅಖಿಲಾಂಕ್ಷೆ ಹೊಂದುತಲಿ ನಡೆಯುತಿಹ ನಿನಗೆ
ಹೇಳುವೆನು ಸಿಹಿಮಾತ ಮುಖದಲ್ಲಿ ನಗುವಿರಲಿ
ಅಭಿಮಾನದಿಂದಲಿ ಮನ ಅರಳಿಕೊಂಡಿರಲಿ ||

ನೃತ್ಯ ಸಂಸ್ಕಾರವು ನಿತ್ಯ ಆರಾಧನೆಗೆ
ಯಕ್ಷಗಾನದ ಜತೆಗೆ ಹೊಂದಿಕೊಂಡಿಹುದು
ಸತ್ಯವಂತರೆ ನೀವು ನಿರ್ಮಲಚಿತ್ತದಲಿ
ನೋಡಿದರೆ ಕಲೆಯೆಂದಿಗೂ ತಲೆಯನೆತ್ತುವುದು ||

– ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು.

Leave a Reply

*

code