ಅಂಕಣಗಳು

Subscribe


 

ಒಳನೋಟ- ಜುಲೈಆಗಸ್ಟ್- ವರ್ಷ ವೈಭವ

Posted On: Thursday, August 13th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

೭ ಜೂನ್: ೧. ಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯದ Dances and a Dance Drama” ಸಂಯೋಜನೆಯ ನಾದ ನೃತ್ಯ ದಿನ.

೨. ನೃತ್ಯಗುರು ಡಿ. ಕೇಶವ ನೇತೃತ್ವದ ಕಲಾಶ್ರೀ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ವಿರ್ಟ್ಜಲ್ಯಾಂಡ್‌ನ ಬಾಸೆಲ್‌ನಲ್ಲಿ ನೃತ್ಯ ಪ್ರದರ್ಶನ.

* ೧೨ ಜೂನ್: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬಾಲ ಕಾರ್ಮಿಕರು ಮತ್ತು ಬಾಲಕಾರ್ಮಿಕ ಪದ್ಧತಿಯ ಕುರಿತಾದ ನೃತ್ಯ ರೂಪಕ ವೈಜಯಂತಿ ಕಾಶಿ ಅವರ ಮಾರ್ಗದರ್ಶನ ಮತ್ತು ನಿರ್ವಹಣೆಯಲ್ಲಿ ಶಾಂಭವಿ ನೃತ್ಯ ಅಕಾಡೆಮಿಯಿಂದ.

* ೧೭ ಜೂನ್: ಬೆಂಗಳೂರಿನಲ್ಲಿ ಶತಾವಧಾನಿ ಡಾ. ಆರ್.ಗಣೇಶ್ ಅವರ ಸಾರಥ್ಯದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯ ಮತ್ತು ವೈಜಯಂತಿ ಕಾಶಿ ಅವರ ಉಭಯ ನಾಟ್ಯ ಪದ್ಧತಿಗಳ ರುಕ್ಮಿಣೀ-ಸತ್ಯಭಾಮಾ ಯುಗಳ ರೂಪಕ.

* ೨೯ ಜೂನ್‌ನಿಂದ : ಕೆರೆಮನೆ ಶಂಭು ಹೆಗಡೆ ಸ್ಮರಣಾರ್ಥ ಇಡಗುಂಜಿ ಮೇಳದಿಂದ ಗುಣವಂತೆಯ ರಂಗಮಂದಿರದಲ್ಲಿ ಸರಣಿ ತಾಳಮದ್ದಲೆ ಮತ್ತು ಪಾತ್ರ ವಿಶ್ಲೇಷಣೆ ; ಹೊರರಾಜ್ಯದಿಂದ ಬಂದು ಕಲಿತ ಯಕ್ಷಗಾನ ವಿದ್ಯಾರ್ಥಿನಿಯರ ಯಕ್ಷ ನೃತ್ಯ ಪ್ರದರ್ಶನ

* ೪ ಜುಲೈ : ೧. ಗುರುಗುಹ ನಾಟ್ಯ ಗಾನ ನಾಟ್ಯ ನಿಲಯಂನ ಶಿಷ್ಯೆ ಸಂಧ್ಯಾ ಶೆಟ್ಟಿ ಮತ್ತು ಜುಲೈ ೧೧ರಂದು ರಮ್ಯಾ ಅವರ ಭರತನಾಟ್ಯ ರಂಗಪ್ರವೇಶ, ಬೆಂಗಳೂರಿನ ಎಡಿ‌ಎ ರಂಗಮಂದಿರದಲ್ಲಿ.

೨. ಕೂಚಿಪುಡಿ ಕಲಾವಿದೆ ವೈಜಯಂತಿ ಕಾಶಿ ಅವರಿಂದ ಶ್ರೀ ವಾಣಿ ಸ್ಕೂಲ್‌ನಲ್ಲಿ, ಜೂನ್ ೭ ರಂದು ಜಿಗಣಿಯ ವ್ಯಾಸ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ಪ್ರಾತ್ಯಕ್ಷಿಕೆ.

* ೧೦ ಮತ್ತು ೧೧ ಜುಲೈ : ಭೂಷಣ್ ಅಕಾಡೆಮಿಯಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪುರುಷ ಮತ್ತು ಯುಗಳ ಕಲಾವಿದರಿಗೆ ಪುರುಷ ಭೂಷಣ ಸ್ಪರ್ಧೆ ; ೧೨ ಜುಲೈ : ಅಕಾಡೆಮಿ ವಿದ್ಯಾರ್ಥಿಗಳಾದ ಗಾನವಿ, ನಿರುಪಮಾ, ಮತ್ತು ರಮ್ಯಾ ಅವರಿಂದ ಕಿಂಕಿಣಿ ಪೂಜಾ ನೃತ್ಯ ಕಾರ್ಯಕ್ರಮ.

* ೧೧ ಮತ್ತು ೧೨ ಜುಲೈ : ಶಾಂಭವಿ ನೃತ್ಯ ಅಕಾಡೆಮಿಯ ಪ್ರತೀಕ್ಷಾ ಕಾಶಿ ಅವರಿಂದ ಮುಂಬೈಯ ಭವನ್ಸ್ ಕಲ್ಚರ್ ಸೆಂಟರ್‌ನಲ್ಲಿ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಉತ್ಸವದ ಅಂಗವಾಗಿ ಮತ್ತು ೧೦ ಆಗಸ್ಟ್ : ತಮಿಳ್ನಾಡಿನ ಪೊಲ್ಲಾಚಿಯಲ್ಲಿ ‘ಕೂಚಿಪುಡಿ ವೈಭವಂ’ ನೃತ್ಯ ಪ್ರದರ್ಶನ.

* ೧೮ ಜುಲೈ : ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಕನ್ನಡ ಸಂಘ ಮತ್ತು ಪದವಿ ಲಲಿತಕಲೆಗಳ ವಿಭಾಗದ ಸಹಯೋಗದಲ್ಲಿ ಸಂಪಾದಕಿ, ಕಲಾವಿದೆ ಮನೋರಮಾ ಅವರಿಂದ ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆ ಕುರಿತ ಉಪನ್ಯಾಸ ಮತ್ತು ಭರತನಾಟ್ಯದಲ್ಲಿ ಅಭಿನಯ ಪ್ರಾತ್ಯಕ್ಷಿಕೆ.

* ೨೪ ಜುಲೈ : ಪದ್ಮಜಾ ಸುರೇಶ್ ಅವರಿಂದ ದೆಹಲಿಯಲ್ಲಿ ಮತ್ತು ೨೫ ರಂದು ಜೈಪುರದಲ್ಲಿ, ೧೪ನೇ ಆಗಸ್ಟ್ ನಂದು ಚೆನ್ನೈಯ ಐಡಿ‌ಎ ಉತ್ಸವದಲ್ಲಿ ನೃತ್ಯ ಕಾರ್ಯಕ್ರಮ

* ೧ ಆಗಸ್ಟ್ : ಸಾಯಿ ನೃತ್ಯ ಸಂಸ್ಥೆಯಿಂದ ತಿಂಗಳ ಸಾಯಿ ನೃತ್ಯೋತ್ಸವ, ಮಲ್ಲೇಶರಂನ ಸೇವಾಸದನ ಆಡಿಟೋರಿಯಂನಲ್ಲಿ

* ಆಗಸ್ಟ್ ೮ : ಭರತನೃತ್ಯ ಸಭಾ ಮತ್ತು ಮಣಿಕೃಷ್ಣ ಅಕಾಡೆಮಿ ಸಹಭಾಗಿತ್ವದಲ್ಲಿ ಶಾಸ್ತ್ರೀಯ ನೃತ್ಯ ಉತ್ಸವ ಉದ್ಘಾಟನೆ – ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆ ಕು. ದಿವ್ಯಾ ಭಟ್ ಅವರಿಂದ ಭರತನಾಟ್ಯ, ಆಗಸ್ಟ್ ೯ : ವಿದುಷಿ ವಾಣಿ ರಾಜಗೋಪಾಲ್ ಮತ್ತು ಸತ್ಯನಾರಾಯಣ ರಾಜು ಅವರಿಂದ ‘ಕೃಷ್ಣಾರ್ಪಣ’ ರೂಪಕ,

* ೧೫, ೧೬ ಆಗಸ್ಟ್: ಸಂಸ್ಕಾರ ಭಾರತಿಯ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತದ ಅಭ್ಯಾಸವರ್ಗ ತಿಪಟೂರಿನ ರಂಗಾಪುರದಲ್ಲಿ ಆಯೋಜನೆ

* ಭೂಷಣ್ ಅಕಾಡೆಮಿಯ ವತಿಯಿಂದ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಇದೇ ಸಾಲಿನ ನವೆಂಬರ್ ೨೮,೨೯,೩೦ರಂದು ರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ವಿಷಯಾಧಾರಿತ ನೃತ್ಯ ಭೂಷಣ ಉತ್ಸವ ಮತ್ತು ಅದರ ಅಂಗವಾಗಿ ಶಾಸ್ತ್ರೀಯ ನೃತ್ಯ ಸ್ಪರ್ಧೆಗಳು ಭರತನಾಟ್ಯಂ, ಕಥಕ್, ಒಡಿಸ್ಸಿ, ಮೋಹಿನಿಯಾಟ್ಟಂ, ಮಣಿಪುರಿ, ಕೂಚಿಪುಡಿ ಮುಂತಾದ ವಿಭಾಗಗಳಲ್ಲಿ ನಡೆಯಲಿವೆ. ಯುಗಳ, ಸಮೂಹ, ಗುಂಪು ನೃತ್ಯಗಳಿಗೆ ಅವಕಾಶವಿದ್ದು ೧೪-೩೫ ವಯೋಮಾನದ ಕಲಾವಿದರು ಭಾಗವಹಿಸಬಹುದು. ಆಸಕ್ತರು ಸೆಪ್ಟೆಂಬರ್ ೨೫ ರ ಒಳಗಾಗಿ ಅರ್ಜಿ, ಸ್ವವಿವರ, ಛಾಯಾಚಿತ್ರ, ಮತ್ತು ಪ್ರದರ್ಶನದ ಸಿಡಿಯನ್ನು ಕಳಿಸಿಕೊಡಬೇಕು.

* Attakkalari Centre for Movement Arts, Bangalore, with the efficient guidance of artistic director Jayachandran Palazhy openingd a Diploma in Movement Arts and Mixed Media which is going to be a 3 year course. Currently they are offering a yearlong certified course in movement arts and dance.  The next course begins on Sept 11th 2009.

Daily technique classes include Contemporary Dances, Bharathanatyam, Ballet, Kalarippayattu, Sports, and Yoga. Creative exercises consist of movement improvisation and introduction to choreographic techniques. Brief modules in Light Design, Dance Pedagogy, Philosophy, and Art History are also part of the curriculum.   They also have a scholarship program for talented students facing financially difficulties.

Attakkalari’s website www.attakkalari.org gives details.

Leave a Reply

*

code