ಅಂಕಣಗಳು

Subscribe


 

ಮಾರ್ಚ್-ಏಪ್ರಿಲ್ 2009

Posted On: Sunday, March 1st, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

 • ಮಾರ್ಚ್ ೩ – ಸನಾತನ ನಾಟ್ಯಾಲಯದಲ್ಲಿ ಮಂಟಪ ಪ್ರಭಾಕರ ಉಪಾಧ್ಯಾಯರ ಏಕವ್ಯಕ್ತಿ ಯಕ್ಷಗಾನ ‘ಜಾನಕೀ ಜೀವನ’ ; ಜೂನ್-ಜುಲೈ ೨೦೦೯ ತಿಂಗಳಿನಲ್ಲಿ ಮಂಗಳೂರಿನ ಕಲಾಸಕ್ತರ ಮನೆಗಳಲ್ಲಿ ನಡುಮನೆ ಏಕವ್ಯಕ್ತಿ ಯಕ್ಷಗಾನ ಸರಣಿ ಕಾರ್ಯಕ್ರಮ ನಡೆಯಲಿದೆ. ಅಪೇಕ್ಷಿತರು ಸನಾತನ ನಾಟ್ಯಾಲಯದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಯವರನ್ನು ಸಂಪರ್ಕಿಸಬಹುದು.
 • ಮಾರ್ಚ್ ೧ರಿಂದ ೧೧ : ಕೇರಳ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ-ರಂಗೋತ್ಸವ ತಿರುವನಂತಪುರದಲ್ಲಿ
 • ಮಾರ್ಚ್ ೩ :  ವಿಶ್ವಪ್ರಸಿದ್ಧ ಖಜುರಾಹೋ ಉತ್ಸವದಲ್ಲಿ ವೈಜಯಂತಿ ಕಾಶಿ ಅವರ ಕೂಚಿಪುಡಿ ನೃತ್ಯ ಪ್ರದರ್ಶನ
 • ಮಾರ್ಚ್ ೮ : ಮೈಸೂರಿನ ಭೂಷಣ್ ಅಕಾಡೆಮಿ ಆಫ್ ಪರ್ ಫಾರ್ಮಿಂಗ್ ಆರ್ಟ್ಸ್‌ನ ಗುರು ವಿದುಷಿ ಅಂಜನಾ ಭೂಷಣ್ ೨೦೦೯ ರ ಸಾಲಿನ ವಿಶಿಷ್ಟ ವನಿತಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಭರತನಾಟ್ಯ ಮತ್ತು ವಿಶಿಷ್ಟಚೇತನ ಮಕ್ಕಳ ವಾಚಿಕ ದೋಷಗಳ ಕುರಿತಾಗಿ ಕೆಲಸ ಮಾಡುತ್ತಿರುವ ಅಂಜನಾ ಅವರಿಗೆ  ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭ  ವಿಶಾಖಪಟ್ಟಣದ ನಟರಾಜ ಮ್ಯೂಸಿಕ್ ಅಂಡ್ ಡ್ಯಾನ್ಸ್ ಅಕಾಡೆಮಿ ಯುವಕಲಾ ಭಾರತೀ ಆಡಿಟೋರಿಯಂನಲ್ಲಿ ಪ್ರಶಸ್ತಿ ವಿತರಿಸಲಾಯಿತು.
 • ಮಾರ್ಚ್ ೧೩ ಮತ್ತು ೧೪: ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ನೇತೃತ್ವದ ಭರತಮುನಿ ಫೌಂಡೇಶನ್ ಫಾರ್ ಏಶ್ಯನ್ ಕಲ್ಚರ್ ಸಂಸ್ಥೆಯ ವತಿಯಿಂದ ದೆಹಲಿ ವಿಶ್ವವಿದ್ಯಾನಿಲಯದ ಸಹ ಪ್ರವಾಚಕ , ಇಂಡಿಯಾಸ್ ಫೋರಂ ಫಾರ್ ಹೆರಿಟೇಜ್ ಸ್ಥಾಪಕ ಸದಸ್ಯ, ಟ್ರಸ್ಟಿ ಭರತ್ ಗುಪ್ತಾ ಅವರಿಂದ ಉಪನ್ಯಾಸ ; ಮಾರ್ಚ್ ೨೦ ರಂದು ಕಾಂಚಿಪುರದ ಶ್ರೀ ಚಂದ್ರಶೇಖರ ಸರಸ್ವತಿ ವಿಶ್ವ ಮಹಾವಿದ್ಯಾಲಯದ ನಿವೃತ್ತ ಕುಲಪತಿ ಡಾ. ಆರ್. ನಾಗಸ್ವಾಮಿ ಅವರಿಂದ ಉಪನ್ಯಾಸ ಮತ್ತು – ಚೆನ್ನೈಯ ಗಾಂಧಿನಗರದ ಸುಬ್ರಹ್ಮಣ್ಯ ಹಾಲ್ ನಲ್ಲಿ
 • ಮಾರ್ಚ್ ೨೨ : ಪ್ರತೀ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಜಯಾ ಟಿವಿ ಪ್ರಾಯೋಜಿಸುವ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ‘ತಕಧಿಮಿತಾ’ ದಲ್ಲಿ  ಪದ್ಮಜಾ ಸುರೇಶ್ ಅವರ ನೃತ್ಯ ಪ್ರದರ್ಶನ ಮತ್ತು ಅತಿಥಿ ತೀರ್ಪುಗಾರರಾಗಿ ಭಾಗವಹಿಸುವಿಕೆ
 • ಮಾರ್ಚ್ ೨೯ : ಭರತನೃತ್ಯ ಸಭಾ ಆಯೋಜಿಸುವ ತಿಂಗಳ ನೃತ್ಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ. ಅರ್ಥಾ ಪೆರ್ಲಾ ಅವರಿಂದ ಭರತನಾಟ್ಯ
 • ಏಪ್ರಿಲ್ ೨೦೦೯- ಭೂಷಣ್ ಅಕಾಡೆಮಿಯು ಜಗನ್ಮೋಹನ ಅರಮನೆಯಲ್ಲಿ ರಾಜ್ಯಮಟ್ಟದ ಮೂರುದಿನಗಳ ಪರ್ಯಂತ ಯುಗಳ ಮತ್ತು ಪುರುಷರಿಗಾಗಿ ಶಾಸ್ತ್ರೀಯ ನೃತ್ಯ ಉತ್ಸವ ‘ಪುರುಷ ಭೂಷಣ’ ವನ್ನು ಏರ್ಪಡಿಸಿದ್ದು, ೫-೧೫ ವಯೋಮಾನದ ಪ್ರತಿಭಾವಂತ ಬಾಲಕರಿಗೆ ಮತ್ತು ೧೫-೩೫ ವಯೋಮಾನದ ಯುವಕರಿಗೆ ಸ್ಪರ್ಧೆಯನ್ನೂ ಆಯೋಜಿಸಿದೆ. ಸಮೂಹ, ಯುಗಳ ಪ್ರದರ್ಶನಕ್ಕೂ ಅವಕಾಶವಿದೆ.
 • ಏಪ್ರಿಲ್ ೨೫-ಭರತನೃತ್ಯ ಸಭಾ ಆಯೋಜಿಸುವ ತಿಂಗಳ ನೃತ್ಯ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ. ಮೂಕಾಂಬಿಕಾ ನೃತ್ಯ ಶಾಲೆಯ ಗುರು ದೀಪಕ್ ಕುಮಾರ್ ಅವರಿಂದ ಭರತನಾಟ್ಯ. ಮೇ ೩ ರಂದು ಚೆನ್ನೈಯ ವಿಜಯಶ್ರೀ ವಿಠ್ಠಲ್ ಅವರಿಂದ ಭರತನಾಟ್ಯ.
 • ಏಪ್ರಿಲ್ ೧೦ ಮತ್ತು ೨೯ : ಪದ್ಮಜಾ ಸುರೇಶ್ ಅವರ ಕಲ್ಪತರು ಕಲಾವಿಹಾರ ಸಂಸ್ಥೆಯ ವಿದ್ಯಾರ್ಥಿಗಳಿಂದ ಬೆಂಗಳೂರಿನ ಇಸ್ಕಾನ್ ಬ್ರಹ್ಮೋತ್ಸವದಲ್ಲಿ ಮತ್ತು ನಯನಾ ಹಾಲ್‌ನಲ್ಲಿ ನೃತ್ಯ ದಿನಾಚರಣೆಯ ಸಂದರ್ಭ ‘ಶ್ರೀ ಮಾಧವೇಂದ್ರಪುರಿ’ ನೃತ್ಯ ಪ್ರದರ್ಶನ.
 • ಏಪ್ರಿಲ್ ೩೦  ಮತ್ತು ೧ ಮೇ : ವಿಶ್ವ ನೃತ್ಯ ದಿನಾಚರಣೆಯ ಪ್ರಯುಕ್ತ ಬೆಂಗಳೂರಿನ ಸೃಷ್ಠಿ ನೃತ್ಯ ಸಂಸ್ಥೆಯ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಾಸ್ತ್ರೀಯ, ಸಮಕಾಲೀನ, ಫ್ಯೂಷನ್, ಜಾನಪದ, ಶಾಸ್ತ್ರೀಯ ನೃತ್ಯಾಧಾರಿತ ಸಿನಿಮಾ ನೃತ್ಯಗಳ ಪ್ರದರ್ಶನ ಸಮ್ಮೇಳನ. ಸಂಶೋಧನಾ ವಿದ್ಯಾರ್ಥಿಗಳ ಸಹಿತ ನೃತ್ಯಾಸಕ್ತ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಹೆಸರು ನೋಂದಾಯಿಸಿ ಪ್ರದರ್ಶನ ನೀಡುವುದರೊಂದಿಗೆ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸಬಹುದು. ಕಾರ್ಯಾಗಾರ ನಡೆಸಲೂ ಅವಕಾಶವಿದೆ. ಏಕವ್ಯಕ್ತಿ ನೃತ್ಯಪ್ರದರ್ಶನಗಳಿಗೆ ೧೦ ನಿಮಿಷ ಮತ್ತು ಸಮೂಹ ನೃತ್ಯಕ್ಕೆ ೨೦ ನಿಮಿಷ ಕಾಲಾವಕಾಶ ನೀಡಲಾಗುವುದು. ಸಮ್ಮೇಳನದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ೧೦೦೦ ರೂಗಳಂತೆ ಫೀಸನ್ನು ಪಾವತಿ ಮಾಡಬೇಕಾಗುವುದು. ಆಸಕ್ತರು ಮೊಬೈಲ್ ನಂಬರ್ ೦೯೮೪೫೬೯೮೦೮೯ ಸಂಪರ್ಕಿಸಬಹುದು.
 • ಇಂಡಿಯಾ ವರ್ಲ್ಡ್ ಕಲ್ಚರಲ್ ಪೋರಂನ ಸದಸ್ಯರಾಗಿ ಜಾರ್ಖಂಡ್‌ನ ಛಾವೋ ನೃತ್ಯದ ಗುರು ಪಂಡಿತ್ ಗೋಪಾಲ್ ಪ್ರಸಾದ್ ದುಬೆ, ಮುಂಬೈಯ ಕಥಕ್ ಕಲಾವಿದೆ ಅಲಕನಂದಾ ಆಯ್ಕೆಯಾಗಿದ್ದಾರೆ.

Leave a Reply

*

code