ಅಂಕಣಗಳು

Subscribe


 

ಪದ್ಮಕೋಶ ಹಸ್ತ

Posted On: Monday, June 8th, 2009
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

padmakosha hastaಲಕ್ಷಣ: ಎಲ್ಲ ಬೆರಳುಗಳನ್ನು ವಿರಳವಾಗಿ ಮಾಡಿ ಬೆರಳುಗಳ ತುದಿಯನ್ನು ಸ್ವಲ್ಪವಾಗಿ ಮಡಿಸಿ ಒಂದಕ್ಕೊಂದು ಸೇರುವಂತೆ, ಧನುಸ್ಸಿನಂತೆ ಬಗ್ಗಿಸಿದರೆ ಪದ್ಮಕೋಶ ಎಂದರೆ ಕಮಲದ ಮೊಗ್ಗು, ಅಥವಾ ಪೂರ್ಣವಾಗಿ ಅರಳದ ಕಮಲ ಎಂದರ್ಥ. ದಿನನಿತ್ಯ ಜೀವನದಲ್ಲಿ ಉಗುರು ಸೂಚಿಸಲು, ಚಿಕ್ಕದು ಎನ್ನಲು, ಗುಂಡಗಿರುವುದು, ಚೆಂಡು, ಊಟ ಮಾಡುವಾಗ ಮುಂತಾದವುಗಳ ಸಂವಹನ ಮಾಡಲು ಉಪಯೋಗಿಸಲಾಗುವುದು. ಮಣಿಪುರಿ ನೃತ್ಯದಲ್ಲಿ ಈ ಹಸ್ತಕ್ಕೆ ಶಾರ್ದೂಲಸ್ಯವೆಂದೂ ಕರೆಯುತ್ತಾರೆ.
ಪದ್ಮಕೋಶವನ್ನು ಹೋಲುವ ಮತ್ತೊಂದು ಅಸಂಯುತ ಹಸ್ತವಿದೆ. ಅದೇ ಕದಂಬ ಹಸ್ತ. ಇದರಲ್ಲಿ ಐದು ಬೆರಳುಗಳ ತುದಿಗಳನ್ನು ಸೇರಿಸಿ ಹಿಡಿಯುತ್ತಾರೆ. ಸಾಮಾನ್ಯವಾಗಿ ಪದ್ಮಕೋಶದ ವಿನಿ೦ೋಗಗಳನ್ನು ಇಲ್ಲಿ ಉಪಯೋಗಿಸಬಹುದು. ಹಸ್ತ ಮುಕ್ತಾವಳಿಯಲ್ಲಿ ಇದು ಉಲ್ಲೇಖಿತವಾಗಿದೆ.
ವಿನಿಯೋಗ: ಬಿಲ್ವ ಮತ್ತು ಬೇಲದ ಹಣ್ಣುಗಳು, ಸ್ತನಗಳು, ವರ್ತುಲ (ಗುಂಡಗೆ), ಚೆಂಡಿನಿಂದ ಆಡುವುದು, ಕುಡಕೆ (ಭರಣಿ), ಊಟ ಮಾಡುವುದು, ಹೂವಿನ ಮಧ್ಯಭಾಗ, ಮಾವಿನ ಹಣ್ಣು, ಹೂಮಳೆ, ಹೂಗುಚ್ಚ, ಜಪಭಾವವನ್ನು ಸೂಚಿಸುವುದು, ಘಂಟಾರೂಪವನ್ನು ತೋರಿಸುವುದು, ಹುತ್ತ, ನೈದಿಲೆ, ಮೊಟ್ಟೆ, ಅಲಂಕಾರ ಭೂಷಣ. ನಾರಂಗಿವೃಕ್ಷ.
ಇತರೆ ವಿನಿಯೋಗ: ಮಿಂಚು, ಗಿರಿಕರ್ಣಿಕಾ ಪುಷ್ಪ, ರೆಂಬೆ ಬಗ್ಗಿರುವುದು, ಚಿನ್ನದ ಪಾತ್ರೆ, ಚಕೋರ ಪಕ್ಷಿ, ಯಜ್ಞಗಳಲ್ಲಿಯ ಆಮಿಷ, ದೇವತೆಗಳ ಪೂಜೆಗಾಗಿ ಕೊಡುವ ಬಲಿ, ಅಗ್ರಪಿಂಡ, ಹೂಗಳನ್ನು ಚೆಲ್ಲುವುದು, ಗಡ್ಡಧಾರಿ, ಕಾಣಿಕೆ, ತಟ್ಟೆ, ಪಿಂಡ, ನೈದಿಲೆ, ೫ ತಲೆಹಾವು, ಕಲ್ಲೆಸೆಯುವುದು, ಪಾರ್ವತಿ-ಚಾಮುಂಡಿಯರೇ ಮೊದಲಾದ ದೇವಿಯರ ದರ್ಶನ.
ಪದ್ಮಕೋಶ ಹಸ್ತವನ್ನು ಕಂಪಿಸುತ್ತಲೇ ಕೆಳಕ್ಕೆ ಹಿಡಿಯುವುದು ಸಪ್ತ ಸ್ವರಗಳಲ್ಲಿ ಒಂದಾದ ನಿಷಾದದ ಸಂಕೇತ. ಪದ್ಮಕೋಶಹಸ್ತವನ್ನು ಸಣ್ಣಗೆ ಅಲ್ಲಾಡಿಸುವುದು ೨೭ ನಕ್ಷತ್ರಗಳ ಪೈಕಿ ಒಂದಾದ ವಿಶಾಖಾ ಎಂತಲೂ, ಪದ್ಮಕೋಶವನ್ನು ಕೆಳಮುಖವಾಗಿ ಹಿಡಿಯುವುದು ಜ್ಯೇಷ್ಠ ನಕ್ಷತ್ರವೆಂದೂ, ಪದ್ಮಕೋಶ ಹಸ್ತಗಳನ್ನು ಬೆಸೆದು ಹೆಬ್ಬೆರಳು ಮತ್ತು ಕಿರುಬೆರಳನ್ನು ಜೋಡಿಸುವುದು ಕುಂಭರಾಶಿಯೆಂದೂ, ಪದ್ಮಕೋಶಗಳನ್ನು ಸ್ವಸ್ತಿಕವಾಗಿರಿಸುವುದು ಪುಗ ವೃಕ್ಷದ ಸಂಕೇತವೆಂದೂ ಅರ್ಥೈಸಲಾಗಿದೆ. ಎಡಕೈಯಲ್ಲಿ ಪದ್ಮಕೋಶವನ್ನು ಕೆಳಮುಖವಾಗಿ ಹಿಡಿದು, ಬಲಗೈಯಲ್ಲಿ ಪತಾಕವನ್ನು ಅದರ ಹಿಂದೆ ಹಿಡಿಯುವುದು ಕರಡಿ ಎಂಬ್ದು ಸೂಚಿಸುತ್ತದೆ. ಸಂಕರ ಹಸ್ತ ವಿಭಾಗದಲ್ಲಿ ಪದ್ಮಕೋಶವನ್ನು ಮೇಲ್ಭಾಗದಲ್ಲಿ ಹಿಡಿದರೆ ಚಂದ್ರನೆಂದು ಅರ್ಥ.
ಕಥಕ್ಕಳಿಯಲ್ಲಿ ಪದ್ಮಕೋಶವನ್ನು ಊರ್ಣನಾಭವೆಂದು ಕರೆಯುವುದು ವಾಡಿಕೆ. ಊರ್ಣನಾಭ ಎಂದರೆ ಜೇಡರ ಹುಳು ಎಂದರ್ಥ.. ಪದ್ಮಕೋಶದ ಎಲ್ಲಾ ಬೆರಳುಗಳನ್ನು ಇನ್ನೂ ಸ್ವಲ್ಪ ಅಂಗೈಯೊಳಗೆ ಬಾಗಿಸುವುದೇ ಊರ್ಣನಾಭ.
ಊರ್ಣನಾಭದ ವಿನಿಯೋಗ: ಕೂದಲಿನಲ್ಲಿ ಹೇನುಗಳಿದ್ದರೆ ತುರಿಸಿಕೊಳ್ಳುವುದು, ಜಿಂಕೆ೦‌ು ಮುಖ, ಕಪಿ, ಸಿಂಹ, ಕೂರ್ಮ, ತಲೆ೦‌ುನ್ನು ಕೆರೆದುಕೊಳ್ಳುವುದು, ಕಳ್ಳತನ, ಆಮೆ, ಸ್ತನಗಳು, ಕ್ಷತ್ರಿಯ,ಜಾತಿ, ಕಲಶ, ಜೇಡರಹುಳು, ಕೂದಲು ಹಿಡಿ೦‌ುುವುದು, ರಕ್ತಕೆಂಪು ಕರ್ಣಿಕಾರ ಹೂ, ತಲೆಬಾಚುವುದು, ಪಂಜವುಳ್ಳ ಮೃಗಗಳು, ನರಸಿಂಹಾವತಾರ, ಕುಷ್ಠ. ಯಕ್ಷಗಾನದಲ್ಲಿ ಕ್ರೂರಮೃಗಗಳು, ರೌದ್ರರಸಕ್ಕೆ ಉಪಯೋಗಿಸುತ್ತಾರೆ. ನಿತ್ಯಜೀವನದಲ್ಲಿ ಭಯಂಕರ, ಕ್ರೂರ, ಕುಷ್ಠ, ಹುಳ, ಕಿರಿಕಿರಿ, ತಲೆಕೆರೆತ ಇತ್ಯಾದಿಗೆ ಬಳಸುತ್ತಾರೆ.
ನಾಟ್ಯಶಾಸ್ತ್ರದಲ್ಲಿ ಉಲ್ಲೇಖಿತವಾದವಾದ ನೃತ್ತ ಹಸ್ತಗಳ ಪೈಕಿ ನಳಿನೀ ಪದ್ಮಕೋಶವೆಂಬ ಹಸ್ತವಿದೆ. ಪದ್ಮಕೋಶ ಹಸ್ತಗಳನ್ನು ವ್ಯಾವೃತ್ತ (ಪಾರ್ಶ್ವಗಳಲ್ಲಿ ಕೈಗಳನ್ನು ಮೇಲಕ್ಕೆತ್ತುವುದು) ಮತ್ತು ಪರಿವರ್ತಿತ(ನಾಟ್ಯಕಾಲದಲ್ಲಿ ಪಾರ್ಶ್ವಗಳಿಂದ ಹಸ್ತಗಳನ್ನು ಮುಂಭಾಗಕ್ಕೆ ತರುವುದು) ವಾಗಿ ತಿರುಗಿಸಿ ಸುತ್ತು ಹಾಕಿಸುವುದೇ ಇದರ ಲಕ್ಷಣ:
ನಳಿನೀ ಪದ್ಮಕೋಶದ ವಿನಿಯೋಗ: ನಾಗಬಂಧ, ಮೊಗ್ಗು, ಸಮನಾಗಿ, ಹಂಚುವುದು, ಹೂಗೊಂಚಲು, ಹತ್ತು ಎನ್ನುವುದಕ್ಕೆ ಮತ್ತು ಗಂಡಭೇರುಂಡ ಪಕ್ಷಿ.

Leave a Reply

*

code