ಅಂಕಣಗಳು

Subscribe


 

ಪಾಶ ಹಸ್ತ

Posted On: Sunday, December 29th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಸೂಚೀಹಸ್ತದ ತೋರುಬೆರಳನ್ನು ಬಾಗಿಸಿ ಒಂದರಲ್ಲೊಂದು ಕೊಂಡಿಹಾಕಿದರೆ ಪಾಶಹಸ್ತ. ಇದನ್ನು ಯಮಪಾಶ ಮುದ್ರೆಯೆಂದೂ ಕರೆಯುವರು. ಪಾಶ ಎಂದರೆ ಹಗ್ಗ ಅಥವಾ ಸರಪಳಿ ಎಂದರ್ಥ. ಈ ಹಸ್ತಕ್ಕೆ ಕಲಹ ಹಸ್ತ ಎಂದು ಬಾಲರಾಮ ಭರತ ಗ್ರಂಥ ಹೇಳಿದೆ. ಶೃಂಖ(ಲ) ಹಸ್ತ ಎನ್ನುತ್ತದೆ ನರ್ತನ ನಿರ್ಣಯ. ಅಭಿನಯದರ್ಪಣದ ಪ್ರಕಾರ ಇದು ನೃತ್ತಹಸ್ತವೂ ಹೌದು. ಗಾಯತ್ರೀ ನ್ಯಾಸದ ‘ಸ್ಯ’ ಅಕ್ಷರಕ್ಕೆ ಪಾಶ ಹಸ್ತವನ್ನು ಸೂಚಿಸಲಾಗಿದ್ದು; ಎಡಗೈ ಮೇಲ್ಮುಖವಾಗಿದ್ದು, ಎಡ ಹೆಬ್ಬೆರಳನ್ನು ನಿಡಿದಾಗಿರಿಸಬೇಕು.

ವಿನಿಯೋಗ : ಪರಸ್ಪರ ಕಲಹ, ಹಗ್ಗ, ಸರಪಳಿ, ಬಂಧ, ಉರುಳು. ಪಾಶ ಹಸ್ತ ತೋರಿದ ನಂತರ ಎರಡೂ ಕೈಗಳಲ್ಲಿ ಮೃಗಶೀರ್ಷ ಹಸ್ತ ಹಿಡಿದರೆ ಅದು ಸಪತ್ನಿ(ಸವತಿ) ಹಸ್ತವೆಂದೆನಿಸುವುದು.
ಯಕ್ಷಗಾನದಲ್ಲಿ ವೈರತ್ವ, ಕಲಹ, ಯುದ್ಧ, ವೈಮನಸ್ಯ ಎಂದು ಸೂಚಿಸಲು ಬಳಸುತ್ತಾರೆ. ನಿತ್ಯಜೀವನದಲ್ಲಿ ಈ ಮೇಲಿನ ಎಲ್ಲಾ ವಿನಿಯೋಗಗಳ ಅರ್ಥದಲ್ಲಿ ಬಳಕೆಯಿದೆ.

printcomp

Leave a Reply

*

code