ಅಂಕಣಗಳು

Subscribe


 

ಸೂರ್ಯ ರಂಗಪ್ರವೇಶ, ನಟ ಸೂರ್ಯ, ಸೂರ್ಯ ಚಿತ್ರಕಾರ

Posted On: Wednesday, October 28th, 2015
1 Star2 Stars3 Stars4 Stars5 Stars (No Ratings Yet)
Loading...

Author: -ಡಾ.ಗೋವಿಂದ ಹೆಗಡೆ, ಹುಬ್ಬಳ್ಳಿ

ಮೂಡಣ ದಿಶೆ ಸಜ್ಜಾಗಿದೆ ಹೊನ್ನೀರ ಚಿಮುಕಿಸಿ

ಬಣ್ಣದ ರಂಗವಲ್ಲಿಯನಿಕ್ಕಿ ಸಿಂಗರಿಸಿದೆ

ತುರಗವೇಳರ ರಥವ ಸಿದ್ಧಗೊಳಿಸಿ ಕಾದಿದ್ದಾನೆ ಅರುಣ

ಬಾ ತಪನ ! ಕಾಯುತ್ತಿರುವಳು ಇಳೆ ನಿನ್ನ ರಂಗಪ್ರವೇಶಕ್ಕೆ !!

***********

ಹುಲಿವೇಷ ನೋಡಿಲ್ಲವೇನು

ಪ್ರಸಾದನ ಕಲೆಯ ಕುಶಲಿ-

ಲೋಕಕ್ಕೆಲ್ಲ ಬಣ್ಣ ಬಳೆವ

ಚತುರ-

ಸೂರ್ಯನ ಕುಂಚಕ್ಕೆ ಸಿಕ್ಕ

ಸಂಜೆಮೋಡಗಳು

 ಮತ್ತಿನ್ನೇನು..?

******

ರಾತ್ರಿ ಕುಣಿಯುವ ಆಟಕ್ಕಾಗಿ

ಸಂಜೆಯೇ ಮುಖಬರೆದು

ಸಜ್ಜಾದ ನಟವರ ಸೂರ್ಯನ

ವೃತ್ತಿಪರತೆಯ ಕಂಡಿರಾ?

****** 

Leave a Reply

*

code