ಅಂಕಣಗಳು

Subscribe


 

ಪ್ರಕೃತಿ ನಟಿ

Posted On: Saturday, December 15th, 2018
1 Star2 Stars3 Stars4 Stars5 Stars (No Ratings Yet)
Loading...

Author: ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಬೆಂಗಳೂರು

ಮುಂಬೆಳಗಿನಲ್ಲಿ ಸಂಹ್ಲಾದವಾತಾವರಣ

ಪಸುರುಡೆಯ ಕಸೆಕಟ್ಟಿ ನಿಂತ ತರುನಟರು

ಪಾರದರ್ಶಕತುಷಾರದ ಜವನಿಕೆಯ ಹಿಂದೆ

ರಂಗದೊಡ್ಡೋಲಗಕೆ ಕಾಯುತಿಹರು

ಚುಮುಚುಮು ನಸುಕಲ್ಲಿ ಆಹ್ಲಾದಕರ ವಾತಾವರಣದಲ್ಲಿ, ಹಸುರು ಬಟ್ಟೆಯ ಕಸೆಕಟ್ಟಿದ ಮರಗಳೆಂಬ ನಟರು ಸಜ್ಜಾಗಿ ನಿಂತಿದ್ದಾರೆ. ಈ ವೇಷಧಾರಿಗಳ ಎದುರು ಪಾರದರ್ಶಕವಾದ ಇಬ್ಬನಿಯ ಪರದೆ ಇದೆ. ತೆರೆ ಸರಿದು ರಂಗಸ್ಥಳವನ್ನು ಪ್ರವೇಶಿಸಲು ನಟವರ್ಗ ಕಾಯುತ್ತಿದೆ.

 

 

 

Leave a Reply

*

code