ಅಂಕಣಗಳು

Subscribe


 

ಸಂಪಾದಕೀಯದ ವಿಚಾರ ಶ್ಲಾಘನೀಯಕರ

Posted On: Thursday, March 26th, 2015
1 Star2 Stars3 Stars4 Stars5 Stars (No Ratings Yet)
Loading...

Author:  -ಕೀರಿಕ್ಕಾಡು ವನಮಾಲಾ ಕೇಶವ ಭಟ್ಟ, ಕಾಸರಗೋಡು

ಒಂಭತ್ತು ಸಂಖ್ಯೆಯ ಹೆಚ್ಚುಗಾರಿಕೆ ಎಲ್ಲರಿಗೂ ತಿಳಿದ ವಿಚಾರ. ನೂಪುರ ಭ್ರಮರಿಯ ದೃಷ್ಟಿಯಿಂದ ಈ ಸಂಖ್ಯೆಗೆ ಹೆಚ್ಚಿನ ಮಹತ್ತ್ವ ಬಂದಿದೆ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ. ಕಾರಣ ಪತ್ರಿಕೆಯ ಜೊತೆಜೊತೆಗೆ ಬೇರೆ ಇನ್ನಿತರ ಸದಭಿರುಚಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ನನ್ನ ಗಮನ ಸೆಳೆಯಿತು.  ಕಲಾಜಗತ್ತಿಗೆ ನೂಪುರ ಭ್ರಮರಿ ಎಂಬ ಹೆಸರಿನ್ನು ನೀಡಿ ನೇಪಥ್ಯದಲ್ಲಿ ದುಡಿಯುತ್ತಿರುವ ಎಲ್ಲ ಕಲಾನುಯಾಯಿ ಒಡನಾಡಿಗಳಿಗೂ ಅಭಿನಂದನೆಗಳು. ನೂಪುರ ಭ್ರಮರಿಯ ಒಂಭತ್ತನೇ ವರುಷದ ಆರಂಭ ಸಂಚಿಕೆಯ ಸಂಪಾದಕೀಯದ ವಿಚಾರ ಶ್ಲಾಘನೀಯಕರ ಎನ್ನಿಸಿ, ಎಲ್ಲ ಕಲಾವೇದಿಕೆಗಳು ಈ ಕುರಿತಾಗಿ ನಿರ್ಣಯ ಒಂದಕ್ಕೆ ಮನಮಾಡುವ ತೀವ್ರತೆ ಇದೆ ಎಂದು ಕಂಡಿತು.

ಆದರೆ ಅದು ಅಷ್ಟು ಸುಲಭವೂ ಅಲ್ಲ ಎಂದು ಮನಸ್ಸು ಪ್ರತಿಸ್ಪಂದಿಸಿತು. ಹಿರಿಯ ರಂಗವಿಮರ್ಶಕ ಜಿ.ಎನ್.ಅಶೋಕವರ್ಧನರ ವಿಮರ್ಶೆಯೂ ಸೊಗಸಾಗಿತ್ತು. ವಿದ್ವಾನ್ ದೀಪಕ್ ಕುಮಾರ್ ಅವರ ನೃತ್ಯಾಂತರಂಗದ ಪ್ರಯತ್ನಗಳಿಗೆ ನಮೋನಮಃ. ಇನ್ನು ಸಂಪಾದಕರ ಡೈರಿಯಿಂದ ಇಣಿಕಿ ನೋಡುತ್ತಿದ್ದ ಉಳಿದ ವಿಮರ್ಶೆಗಳೂ ಕಲಾಸಾಧನೆಯ ವಿವಿಧ ಘಟ್ಟಗಳನ್ನು ಕಾಣಿಸಿ ಮನದಣಿಸುವಲ್ಲಿ ಯಶಸ್ವಿಯಾದವು.

ಸತತ ಅಭ್ಯಾಸಿಸಲು ಬರುವುದೀ ನೃತ್ಯಕಲೆ
ಎನುತ ನೀ ಭಾವಿಸಿದೆ ಆದರದು ವ್ಯರ್ಥ
ಕಲೆಯ ಬಲೆಯೊಳಗೊಂದು ಹಳೆಯ ಆಲಾಪನೆಯ ಸೆಲೆ
ನೆಲೆಗೊಂಡು ಇದೆಯೆಂದು ಮನಗೊಂಡಿರು
ನಿರತ ಅಭ್ಯಾಸದಿಂ ಕಲೆ ಕೈಗೆ ಎಟುಕಿದರೂ
ಸತತ ಶ್ರಮ ನಿಯಮಗಳು ಒಂದಿಗಿರಬೇಕು
ದೂರದೂರಿಂದ ನೀ ನೀರು ತರುತಿರುವವರ
ತಾರತಮ್ಯತೆಗಳನ್ನು ಮನಗಂಡಿರುವೆಯಾ?
ಆರು ಅಂತರಕಿಂತ ಎತ್ತರಕೆ ಏರಿಸಿದ
ನೀರಜೆಯರ ಜಾಣತನ ಅರಿವು ಆಗಿದೆಯೋ ?
ನಿರತ ಅಭ್ಯಾಸದಿಂ ಈ ಅರೀತಿ ನಿರಾಯಾಸದಿಂ
ತರುಣೀಯರು ಈ ಕಲೆಗೆ ಸೆಲೆಯಾಗಿ ಇಹರು

Leave a Reply

*

code