ಅಂಕಣಗಳು

Subscribe


 

ಸಂಪುಟ ಹಸ್ತ

Posted On: Tuesday, October 15th, 2013
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಲಕ್ಷಣ: ಸರ್ಪಶಿರಹಸ್ತಗಳನ್ನು (ಅಂಗೈಯನ್ನು ಸಲ್ಪ ಒಳಕ್ಕೆ ಕುಗ್ಗಿಸಿ ಬೆರಳುಗಳನ್ನು ಒತ್ತೊತ್ತಾಗಿ ಹಿಡಿಯುವುದು) ಅಡ್ಡಲಾಗಿ ಒಂದರ ಮೇಲೊಂದು ಮುಚ್ಚಿದಂತೆ ಇಟ್ಟರೆ ಸಂಪುಟ ಹಸ್ತ.  ಸಂಪುಟ ಹಸ್ತದಂತೆ ಎದೆಯ ಬಳಿ ಅಂಗೈ ಮೇಲೆ ಮತ್ತೊಂದು ಅಂಗೈಯಿರಿಸುವುದು ಯೋಗ ಸಂಪುಟ ಮುದ್ರಾ ಎನಿಸಿಕೊಳ್ಳುವುದು. ಅದೇ ಸರ್ಪಶಿರಹಸ್ತಗಳನ್ನು ಅಂಗುಷ್ಠ ಸಮೇತ ಒಂದರ ಮೇಲೊಂದನ್ನು ಮುಚ್ಚಿದಂತೆ ಇಟ್ಟಗೆ ಸಂಕಲ್ಪಹಸ್ತವೆನಿಸುತ್ತದೆ. ಸಂಕಲ್ಪ ಎಂದರೆ ಕಾರ್ಯನಿಶ್ಚಯ ಎಂದರ್ಥ.

samputa2

ಸಂಪುಟ ಹಸ್ತದಂತೆ ಎಡಗೈಯನ್ನು ಎದೆಯ ಬಳಿ ಉತ್ಥಾನವಾಗಿರಿಸಿ, ಒಳ ಬಗ್ಗಿದಂತಿರುವ ಬಲಗೈಯನ್ನು ಅದರ ಮೇಲೆ ಮುಚ್ಚುವುದು ಕೂರ್ಮ ಮುದ್ರೆಯ ಮತ್ತೊಂದು ಬಗೆಯಾಗಿದೆ. ಗಾಯತ್ರೀಮಂತ್ರದ  ಅಕ್ಷರಕ್ಕೆ ಸಂಪುಟ ಮುದ್ರೆಯ ಬಳಕೆಯಿದ್ದು; ಅಲ್ಲಿನ ವಿನಿಯೋಗದಲ್ಲಿ ಸಂಪುಟದ ಎರಡೂ ಹಸ್ತಗಳ ಬೆರಳುಗಳನ್ನು ಜೋಡಿಸಿ ಬಟ್ಟಲಿನಂತೆ ಹಿಡಿಯುವುದು ಕ್ರಮವಾಗಿದೆ. ಅಂತೆಯೇ ಮಂತ್ರದ ವಿ ಅಕ್ಷರಕ್ಕೆ ವಿತತಂ ಮುದ್ರೆಯನ್ನು ಸೂಚಿಸಲಾಗಿದ್ದು; ಅದೂ ಕೂಡಾ ಸಂಪುಟ ಮುದ್ರೆಯ ಹಸ್ತವಿನ್ಯಾಸವನ್ನು ಹೊಂದಿದೆ. ಆದರೆ ವಿತತಂ ಮುದ್ರೆಯ ಪ್ರಕಾರ ಸಂಪುಟಹಸ್ತದ ಬೆರಳುಗಳು ಕೆಳಮುಖವಾಗಿ, ಅಕ್ಕಪಕ್ಕ ಇರುವಂತೆ ಸ್ವಲ್ಪ ಅಂತರದಲ್ಲಿಟ್ಟುಕೊಳ್ಳುವುದು ವಿಧಿಯಾಗಿದೆ.

ವಿನಿಯೋಗ : ಪದಾರ್ಥಗಳನ್ನು ಮುಚ್ಚಿಡುವುದು, ಡಬ್ಬಿ, ಅಡಗಿಸಿಡುವುದು.

ಇತರೇ ವಿನಿಯೋಗ : ಶುಭಾಶುಭ ಕರ್ಮಗಳಲ್ಲಿನ ಸಂಕಲ್ಪ, ಅಂಗೀಕಾರ, ಶಪಥ, ಚಿಕ್ಕ ವಸ್ತುವನ್ನು ಮುಚ್ಚುವುದು, ಕಷ್ಟ, ಭಯ, ವಿಶ್ವಾಸದಿಂದ ಕೊಟ್ಟದ್ದನ್ನು ಸ್ವೀಕರಿಸುವುದು. ಭರತಾರ್ಣವದ ಪ್ರಕಾರ ಎಡಗೈಯ್ಯಲ್ಲಿ ಕಟಕಹಸ್ತವನ್ನು, ಬಲಗೈಯ್ಯಲ್ಲಿ ಸಂಪುಟ ಹಸ್ತವನ್ನೂ ಎದೆಯ ಮೇಲಿರಿಸುವುದು ವೇಶ್ಯಾ ಹಸ್ತವೆನಿಸುವುದು. ಎಡಗೈಯ್ಯಲ್ಲಿ ಕಟಕ ಮುದ್ರೆ ಹಿಡಿದು ಎದೆಯ ಬಳಿಯಿರಿಸಿ, ನಂತರ ಸಂಪುಟ ಹಸ್ತವನ್ನು ಇಡುವುದು ವಿನಯಶೀಲೆ ಎಂಬುದನ್ನು ಸೂಚಿಸುವುದು.

ನಿತ್ಯಜೀವನದಲ್ಲಿ ಮುಚ್ಚಿಡುವುದು, ಗೌಪ್ಯ, ಸಂಕಲ್ಪ, ಶಪಥ, ಬಿಗಿಯಾದುದು ಎನ್ನಲು ಬಳಸುತ್ತಾರೆ.

Leave a Reply

*

code