ಅಂಕಣಗಳು

Subscribe


 

ನಾಟ್ಯಶಾಸ್ತ್ರದ ದಶರೂಪಕದ ವಿವರಣೆಯಲ್ಲಿ (18ನೇ ಅಧ್ಯಾಯ) ಪಾರಿಭಾಷಿಕ ಪದಗಳು  

Posted On: Wednesday, March 29th, 2023
1 Star2 Stars3 Stars4 Stars5 Stars (No Ratings Yet)
Loading...

Author: ಡಾ. ಪ್ರತಿಭಾ ಸತ್ಯನಾರಾಯಣ, ಬೆಂಗಳೂರು

ನೂಪುರ ಭ್ರಮರಿ (ರಿ.)  IKS Centre– ಶಾಸ್ತ್ರರಂಗ ಅಧ್ಯಯನ ತರಬೇತಿಯ (Internship/Fellowship) ಅಂಗಭಾಗವಾಗಿ  ಪ್ರಕಟವಾದ ಲೇಖನ – 11

 1- ಅಂಕ (अङ्क:) 

ನಾಟ್ಯಶಾಸ್ತ್ರದ ಹದಿನೆಂಟನೇ ಅಧ್ಯಾಯದಲ್ಲಿ, ಅಂಕ ಎಂಬ ಪಾರಿಭಾಷಿಕ ಪದವಿದೆ. अङ्क इति रूढिशब्दो भावैश्चा रसैश्च रोहयत्यर्थान्ಎಂದು ಹೇಳಿ, ಭಾವಗಳಿಂದ ರಸಗಳಿಂದ ಅರ್ಥವನ್ನು ಮೇಲಕ್ಕೆ  ತರುವ, ಅಥವಾ ಉತ್ಕರ್ಷಿಸುವ ಭಾಗವೇ ಅಂಕ, ಎಂದೆನಿಸಿ, ಅದು ರೂಢಿಶಬ್ದವಾಗಿದೆ ಎಂದು ತಿಳಿಸಿದ್ದಾರೆ. (18 ನೇ ಅಧ್ಯಾಯ,13 ನೇ ಶ್ಲೋಕ) ಅನೇಕ ವಿಧಾನಗಳನ್ನು  ಉಳ್ಳದ್ದಾಗಿರುವುದರಿಂದ ಪದವನ್ನು ಬಾಳಸಲಾಗಿದೆ, ಎಂದು ತಿಳಿಸುತ್ತಾರೆ. 

ಅಂಕ ಎಂಬ ಪದವುಅಂಕ್ಎಂಬ ಧಾತುವಿನಿಂದ ನಿಷ್ಪನ್ನವಾಗಿದ್ದು, ಅದರ ಅರ್ಥ, “ಮುಂದೆ ಸಾಗುವುದು, ಚಿಹ್ನೆಯಿಂದ ಮುದ್ರಿಸುವುದು, ಎಣಿಸುವುದುಎಂದು. ಎಲ್ಲಾ ಅರ್ಥಗಳನ್ನೂ ನಾವು ನಾಟಕದಲ್ಲಿನ ಒಂದು ಭಾಗವಾದ ಅಂಕ ಎಂಬ ಪದವನ್ನು ಅರ್ಥೈಸಲು ಉಪಯೋಗಿಸಬಹುದು. ಹೀಗಾಗಿ, ನಾಟಕದಲ್ಲಿನ ಭಾಗಗಳನ್ನು ಅಂಕಗಳಾಗಿ ವಿಂಗಡಿಸಬಹುದು. 

 ಗೂಢವಾದ ಅಥವಾ ಮರೆಮಾಚಿ ಅರ್ಥವನ್ನು ಅಂಕವು ತೋರುವುದು, ಎಂದು ಭಟ್ಟಲೋಲ್ಲಟಾದಿಗಳು ಹೇಳಿದರೆ ಮತ್ತೆ ಕೆಲವರು ಅರ್ಥದ ಉತ್ಕರ್ಷ ಇಲ್ಲಾಗುತ್ತದೆ ಎನ್ನುತ್ತಾರೆ. 

 ಅವಸ್ಥೆಗಳಾದ ಬೀಜ, ಬಿಂದು ಇತ್ಯಾದಿಗಳು ಅಂಕದಲ್ಲಿ ಆರಂಭವಾಗಿದ್ದರೆ,ಅದು, ಬಿಂದುವನ್ನು ಬಿಟ್ಟು, ಮಿಕ್ಕೆಲ್ಲಾ ಅವಸ್ಥೆಗಳನ್ನು ಅಂಕದಲ್ಲಿಯೇ ಮುಗಿಸಬೇಕು. 

 ಕೋಹಲನ 3 ಪ್ರಕಾರದ ಅಂಕಗಳು : 

1- ಚೂಡಾ ಅಂಕ.. ಇದರಲ್ಲಿ, ಯಾರ ಹುಡುಕುವಿಕೆಯಿರುತ್ತದೆಯೋ, ಅವರು ಸಿಕ್ಕಿದ ಅಂಕ. ಉದಾ : ರತ್ನಾವಳಿ ನಾಟಕದ ಮೊದಲ ಅಂಕ.

 2–. ಚೂಲಿಕಾ ಅಂಕಎಲ್ಲಿ ಬೀಜಲಕ್ಷಣದ ಸಂಹಾರವಾಗುವುದೋ,. ಉದಾ : ರತ್ನಾವಾಳಿಯ ಎರಡನೇ ಅಂಕ 

3-  ನಾಟಕದ ಕಡೆಯ ಭಾಗದಲ್ಲಿ. ಉದಾ ; ಐಂದ್ರಜಾಲಿಕನ ದೃಶ್ಯ, ರತ್ನಾವಳಿಯ ಮೂರನೇ ಅಂಕ. 

 ಅಂಕದಲ್ಲಿ ವರ್ಣನೀಯ ವಸ್ತು ಎರಡು ವಿಧ- ಮುಖ್ಯ ಮತ್ತು ಉಪಯೋಗಿ ಎಂದು. ಕಥೆಗೆ ಸಾಕ್ಷಾತ್ತಾಗಿ ಸಂಬಂಧಿಸಿದ್ದು ಮುಖ್ಯ. ಉಳಿದದ್ದು ಗೌಣ ಅಥವಾ ಉಪಯೋಗಿ. 

 

2- ಜಾತಿ 

ಸಂಗೀತದ ಪಾರಿಭಾಷಿಕ ಪದ 

ಸ್ವರೇಷು ಗ್ರಹಾದಿ ದಶಕವಿಭಾಗನಿಯತಾ ಜಾತಿ:” ಎಂದಿದ್ದಾನೆ. ಸ್ವರಗಳಲ್ಲಿ ಗ್ರಹಭೇದ ಮಾಡಲು ಉಪಯುಕ್ತವಾದವು ಜಾತಿ. 

ಇದರಿಂದ ಹುಟ್ಟುತ್ತದೆ ಎಂಬ ಅರ್ಥದಲ್ಲಿಜಾಧಾತುವಿದೆಷಡ್ಜ ವೇ ಮೊದಲಾದ  ಸಪ್ತ ಜಾತಿಗಳು ಇವೆ (18,5) 

 

3- ಧ್ವನಿ 

रक्तो अरक्तो वा ध्वनिः 

ಭಾವನೆಗಳಿಗೆ ಸಂಬದ್ಧಪಟ್ಟದ್ದೋ, ಅಥವಾ ಪಡದೆ ಇರುವುದೂ ಧ್ವನಿಯಾಗುತ್ತದೆ. 

ಧ್ವನತಿ  ಇತಿ ಧ್ವನಿ :.  

ಯಾವುದು ಶಬ್ದ ಮಾಡುವುದೋ ಅಥವಾ ಪ್ರತಿಧ್ವನಿಸುವುದೋ ಅದು ಧ್ವನಿ.(18,5). ಪದವನ್ನೇ ಮುಂದೆ ಆಲಂಕಾರಿಕರು ವಿಶಿಷ್ಟವಾದ ಸೂಚ್ಯವಾದ ಅರ್ಥದ ಬೋಧನೆಗೂ ಸೂಚಿಸುತ್ತಾರೆ. 

 

4. ಶ್ರುತಿ  

ध्वनिः स्थानं तदन्तरालं श्रुतिः 

ಧ್ವನಿಯು ಹೊರಹೋಮ್ಮವ ಮೂಲ ಸ್ಥಾನ ಶ್ರುತಿ . 

ಶೃಶ್ರವಣೆ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ (18,5) 

 

5- ಪ್ರವೇಶಕ (प्रवेशकः )

वृत्तवर्तिष्यमानानां कथाम्शानां निदर्शकः | 

संक्षेपार्थस्तु प्रवेशक: नीचपात्रप्रयोजकः || 

ನಾಟಕದ ಮಧ್ಯದಲ್ಲಿ, ನೀಚಪಾತ್ರಗಳು ಬಂದು, ಚಿಕ್ಕದಾಗಿ ಪ್ರಾಕೃತದಲ್ಲಿ ಮಾತಾಡಿ, ರಂಗದ ಮೇಲೆ ತೋರಿಸಲಾಗದ ಯುದ್ಧ, ಮೃತ್ಯು ಮೊದಲಾದ ದೃಶ್ಯಗಳನ್ನು ಸಂಭಾಷಣೆಯ ಮುಲಕ ತೋರಿಸಿ ಕಥೆಯನ್ನು ಮುಂದೆ ಸಾಗಿಸುತ್ತಾರೆ.(18,11) 

 

6- ಈಹಾಮೃಗ 

ईह् ಧಾತುವಿನಿಂದ ನಿಷ್ಪನ್ನವಾದ ಪದವು ದಶರೂಪಕಗಳಲ್ಲಿ ಒಂದು ಪ್ರಕಾರವಾಗಿದೆ. ಉದ್ಧತ ದೈವೀಪುರುಷರೇ ಎಲ್ಲಿ ನಾಯಕರೋ ಮತ್ತು ಶೃಂಗಾರವೇ ಪ್ರಧಾನವಾದ ಅಂತಹ ನಾಲ್ಕು ಅಂಕಗಳ ರೂಪಕಭೇದ ಇದು. “इहा चेष्टा मृगस्येव स्त्रीमात्रार्थं यत्र ईहामृगःಎಲ್ಲಿ  ಮೃಗದ ರೀತಿ ಸ್ತ್ರೀಸಂಬದ್ಧವಾದ ಕ್ರಿಯೆಯು ನಡೆಯಿತ್ತದೆಯೋ, ಅದು ಈಹಾಮೃಗ  ಎಂದು ಅರ್ಥೈಸಬಹುದು.(18,78) 

 

7. ನಾಯಕ 

ನಾಟಕ / ಕಾವ್ಯದಲ್ಲಿ ಅತ್ಯಂತ ಪ್ರಮುಖವಾದ ಪುರುಷಪಾತ್ರ ನಾಯಕನದ್ದು. ನಾಲ್ಕು ರೀತಿಯ ನಾಯಕರಿರಬಹುದು 

ಧೀರೋದಾತ್ತ ನಾಯಕನು ಧೀರ ಮತ್ತು ಉದಾತ್ತನು. ಉದಾ : ರಾಮ, ಕೃಷ್ಣ 

ಧೀರೋದ್ಧತ ನಾಯಕಇವನು ಧೀರ, ಆದರೆ ಅಹಂಕಾರಿ. ಉದಾ : ದುರ್ಯೋಧನ, ರಾವಣ 

ಧೀರಲಲಿತಧೀರನಾಗಿದ್ದು, ಲಲಿತಕಲೆಗಳಲ್ಲಿ ಆಸಕ್ತನು ಇವನುಉದಾ : ಉದಯನ 

ಧೀರಶಾಂತ : ಧೀರನಾಗಿದ್ದು ಶಾಂತನಾಗಿರುತ್ತಾನೆ. ಉದಾ : ಬುದ್ಧ, ಜೀಮೂತವಾಹನ( 18.11) 

 

8- ವೀಥಿ 

ಸಾಮಾನ್ಯಾರ್ಥದಲ್ಲಿ ವೀಥಿ ಎಂದರೆ ಬೀದಿ, ಅಥವಾ ಮಾರ್ಗ ಎಂದರ್ಥ. ಆದರೆ ಇಲ್ಲಿ ಅದು ರೂಪಕದ ಒಂದು ಪ್ರಕಾರ. ಒಂದು ಅಥವಾ ಎರಡು ಪಾತ್ರಗಳನ್ನೊಳಗೊಂಡಿದ್ದು, ನವರಾಸಭರಿತವಾಗಿದ್ದು,36 ಲಕ್ಷಣಗಳನ್ನೊಳಗೊಂಡಿದ್ದು,13 ಅಂಗಗಳನ್ನೂ ಹೊಂದಿರುತ್ತದೆ. (18,115) 

 

9 – ನಾಟಿಕಾ 

ರೂಪಕಗಳಲ್ಲಿಯೇ ಅನೇಕ ಭೇದಗಳಿದ್ದು, ಅದರ ಸಾಮಾನ್ಯ ಲಕ್ಷಣವನ್ನು ಭರತನು ಕೊಟ್ಟಿರುವನು. ಆದರೆ, ಇನ್ನೂ ಹೆಚ್ಚು ಸಂಕೀರ್ಣತೆ ಇರುವುದರಿಂದ, ನಾಟಕ ಮತ್ತು ಪ್ರಕರಣದ ಅಂಶಗಳನ್ನು ಆಯ್ದು, ಜೋಡಿಸಿ ಮಾಡುವ ರೂಪಕದ ಉಪಪ್ರಕಾರವನ್ನು ನಾಟಿಕಾ ಎನ್ನುತ್ತಾರೆ. ಚಾರಿತ್ರಿಕವಸ್ತುವುಳ್ಳ, ರಾಜನೇ ನಾಯಕನಾಗಿರುವ, ನಾಯಿಕೆಯು ಅಂತಃಪೂರಕನ್ಯೆ ಅಥವಾ ಸಂಗೀತಶಾಲೆಯ ಕನ್ಯೆಯಾಗಿದ್ದು, ಸ್ತ್ರೀ ಬಾಹುಲ್ಯವಿರುವ, ನಾಲ್ಕು ಅಂಕಗಳುಳ್ಳ, ಕೈಶಿಕಿ ವೃತ್ತಿಯುಳ್ಳದ್ದಾಗಿದೆ, ನಾಟಿಕಾ. ಇದಕ್ಕೆ ಉದಾಹರಣೆ, ಹರ್ಷನ ರತ್ನಾವಳಿ ನಾಟಿಕಾ (18,57-61) 

 

10- ಭಾಣ 

ಹಾಸ್ಯರಸಕ್ಕೆ ಉಚಿತವಾಗಿ ವಿಟ, ಧೂರ್ತ ಇತ್ಯಾದಿ ಒಬ್ಬರೇ ಬಂದು ನಟಿಸುವ ರೂಪಕದ ಭೇದ ಭಾಣ. ಇದಕ್ಕೆ ಅಭಿನವಗುಪ್ತನು एकमुखेनैव भाण्यन्ते उक्तिमन्तः क्रियन्ते अप्रविष्टा अपि पात्रविशेषा यत्रेति भाणः 

ಪರರ ವಿಷಯವನ್ನಾಗಲಿ ಅಥವಾ ತನ್ನದೇ ಹೋಗಳುವಿಕೆಯಾಗಲಿ ಇಲ್ಲಿ ಕಾಣುತ್ತದೆ. ತಾನು ತನ್ನ ಬಗ್ಗೆ ಮಾತಾಡಿ, ಬೇರೆಯವರನ್ನು ಕೇಳುವಂತೆ ಅಭಿನಯಿಸಿದ, ಅವರ ಪಾತ್ರವಾಗಿಯೂ ಮಾತಾಡುವುದು ಭಾಣದಲ್ಲಿ.(18,108 )

References : 

  1. Natyashastra, published by parimal publications, book 2 
  1. Sanskrit- English dictionary of V. S. Apte 
  1. Natyashastra, edited by Dr. Unni 

Leave a Reply

*

code