ಅಂಕಣಗಳು

Subscribe


 

ಖಾಸಗಿ ವಾಹಿನಿಗಳು ಶಾಸ್ತ್ರೀಯ ಕಲೆಗಳಲ್ಲಿ ಮೌನ ಯಾಕೆ ತಾಳಿದೆ?

Posted On: Tuesday, December 15th, 2015
1 Star2 Stars3 Stars4 Stars5 Stars (1 votes, average: 5.00 out of 5)
Loading...

Author: ಅಕ್ಷಯರಾಮ ಕೆ., ಬೆಳ್ಳಾರೆ, ದಕ್ಷಿಣಕನ್ನಡ

ನಾಟ್ಯವೆಂದಾಗ ಸಾಮಾನ್ಯ ವೀಕ್ಷಕ ಬಯಸುವುದೇನು? ಶಾಸ್ತ್ರೀಯ
ನೃತ್ಯದ ಬಗೆಗಿನ ಅಸಡ್ಡೆಗೆ ಕಾರಣ ಯಾವುದು ಎಂಬುದನ್ನು ವೀಕ್ಷಕರ
ನೆಲೆಯಲ್ಲಿ ನಿಂತು ಭ್ರಮರಿಯ ಅಂಗಳದಲ್ಲಿ ಮಾತನಾಡಿದ್ದಾರೆ
ಅಕ್ಷಯರಾಮ ಕೆ.,

ನೃತ್ಯದ ಬಗೆಗಿನ ಎಲ್ಲ ಸಂವಾದಗಳಿಗೂ ಇಲ್ಲಿ ಆದ್ಯತೆಯಿದೆ.
ನಾಟ್ಯವೆಂದೊಡನೆ ಸಾಮಾನ್ಯನ ಕಣ್ಣ ಮುಂದೆ ಬರುವುದು ಭರತನಾಟ್ಯ.
ಮೈ ತುಂಬಾ ಆಭರಣ, ಅಲಂಕಾರ, ಹಿಮ್ಮೇಳ-ಪಕ್ಕವಾದ್ಯ. ಹಾಡಿಗೆ
ತಕ್ಕದಾಗಿ ನೃತ್ಯ, ಆಂಗಿಕ ಚಲನೆ. ಓರ್ವ ಸಾಮಾನ್ಯ ವೀಕ್ಷಕನಿಗೆ ಇದಕ್ಕಿಂತ
ಆಚಿನದ್ದು ಕಲ್ಪನೆಗೂ ಮೀರಿದ ವಿಷಯಗಳು.
ಭರತನಾಟ್ಯದಲ್ಲಿನ ವಿವಿಧ ಅಂಗಗಳು, ಪಾರಿಭಾಷಿಕ ಶಬ್ದಗಳು,
ಭಂಗಿಗಳು ಇವ್ಯಾವುವೂ ಆತನ ತಲೆಯೊಳಗೆ ಹೊಗುವುದು ಕಡಿಮೆ. ನೃತ್ಯಪಟುವು
ನರ್ತಿಸುತ್ತಿದ್ದರೆ ಆ ಹೆಜ್ಜೆ, ಲಯ, ಕಣ್ಣಿನ ಚಲನೆ, ಮುಖದಲ್ಲಿ ವ್ಯಕ್ತಪಡಿಸುವ
ಭಾವಗಳು ಎಲ್ಲವೂ ಆತನ ಗಮನ ಸೆಳೆಯುತ್ತವೆ. ನಾಟ್ಯವೆಂಬುದು ಆತನಿಗೆ
ಸಂತೋಷ, ಸಮಾಧಾನ ನೀಡುವ ಸಾಧನ ಮಾತ್ರ. ಕಲಾವಿದರ ಮುಖದ ಭಾವ,
ಕಣ್ಣ ಮಾತುಗಳು ಪರಿಣಾಮಕಾರಿಯಾಗಿದ್ದು ಸಾಮಾನ್ಯ ಪ್ರೇಕ್ಷಕರನ್ನು ಬೇರೊಂದು
ಅಲೌಕಿಕ ಲೋಕಕ್ಕೆ ಕೊಂಡೊಯ್ಯುವುದೇ ಅಲ್ಲವೇ ನೃತ್ಯದ ಉದ್ದೇಶ?
ಒಮ್ಮೊಮ್ಮೆ ಶಾಸ್ತ್ರೀಯ ನೃತ್ಯಪ್ರಕಾರಗಳೆಲ್ಲವೂ ಹಳೆಯವು, ಆಕರ್ಷಣೀಯವಲ್ಲ
ಎನ್ನುವ ಭಾವನೆ ಮೂಡುತ್ತದೆ. ಕಾರಣ, ಪಾಶ್ಚಾತ್ಯ ನೃತ್ಯ ಶೈಲಿ, ಸಿನಿಮಾದ
ಅಬ್ಬರದ ಸಂಗೀತ, ಆಡಂಬರದ ಪ್ರಪಂಚ ಎಲ್ಲವೂ ನೋಡುಗರ ಮನಸ್ಸು
ಕೆಡಿಸುತ್ತಿರುವುದು. ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೂಡಾ ಇಂತಹ
ಪಾಶ್ಚಾತ್ಯ-ಸಿನಿ ಸಂಸ್ಕೃತಿಗೇ ಆದ್ಯತೆ ನೀಡಿ ಉರಿಯುವ ಬೆಂಕಿಗೆ ತುಪ್ಪ
ಸುರಿಯುತ್ತಿದೆ. ಮಾತ್ರವಲ್ಲ, ಶಾಸ್ತ್ರೀಯ ಪದ್ಧತಿಗಳು ಮನಸ್ಸಿನಾಳಕ್ಕಿಳಿದು ಅಲೌಕಿಕ
ಭಾವನೆಯನ್ನು ಉಂಟುಮಾಡುವುದರ ಬಗ್ಗೆ ಅಪರೂಪಕ್ಕೊಮ್ಮೆಯಾದರೂ
ಯಾವುದೇ ಕಾರ್ಯಕ್ರಮ,ವಿಮರ್ಶೆಗಳು ಪ್ರಸಾರ ಆಗುವುದಿಲ್ಲ. ಈ ಕುರಿತಾಗಿ
ಇನ್ನಾದರೂ ಖಾಸಗಿ ವಾಹಿನಿಗಳು ಒಮ್ಮೆ ಪ್ರಯತ್ನಿಸಬಾರದೇಕೆ?

3 Responses to ಖಾಸಗಿ ವಾಹಿನಿಗಳು ಶಾಸ್ತ್ರೀಯ ಕಲೆಗಳಲ್ಲಿ ಮೌನ ಯಾಕೆ ತಾಳಿದೆ?

  1. ರೋಹಿಣಿ ಸುಬ್ಬರತ್ನಂ ಕಾಂಚನ

    ಹೆಚ್ಚಿನ ಶ್ರೋತೃಗಳು ವಿದ್ಯಾವಂತರೂ ಸಹೃದಯರೂ ಕಲಾಪ್ರೇಮಿಗಳೂ ಆಗಿರುವುದು, ನಮ್ಮದು ಎಂಬುದರ ಬಗ್ಗೆ ಅಭಿಮಾನ ಶೂನ್ಯರೂ ಮುಂದಿನ ಸಂತತಿಯ ಬಗ್ಗೆ ಕಾಳಜಿ ಇಲ್ಲದೇ ಇರುವುದರಿಂದಲೂ ನಿಮ್ಮಂತಹ ಹಾಗೂ ನಮ್ಮಂತಹವರು ಅಲ್ಪಸಂಖ್ಯಾತರಾದ(ಸಂಖ್ಯೆಯಲ್ಲಿ ಅಲ್ಪರು) ಕಾರಣದಿಂದಲೂ ಚಾನಲ್‌ಗಳನ್ನು ಮಾಡುವವರೂ ಸಂಸ್ಕೃತಿಯ ಹಾಗೂ ಕಲೆಯ ಬಗ್ಗೆ ಅನಕ್ಷರಸ್ತರೂ ಅನಾಸಕ್ತರೂ ಆದಕಾರಣ ನೀವು ಹೇಳಿದ ಸಮಸ್ಯೆ ಉಂಟಾಗಿದೆ ಎನ್ನಿಸುತ್ತದೆ.

  2. Dr. Mala Shashikanth

    Cultural Promotion through TV channel is absolutely necessary

  3. Vidushi Veena Murthy vijay

    Dance should be promoted initially for short duration(it can be 3 minutes only) to make it interesting. But not through reality shows as such. And a tv channel forum should give short films of excellent classical dances as a relief from boring serials and later let they decide after seeing the response. I hope it makes tv channels situation best than today.

Leave a Reply

*

code