ಅಂಕಣಗಳು

Subscribe


 

ನೂಪುರದಿಂದ ಆಹ್ಲಾದ, ಆನಂದ ಸೃಷ್ಠಿ.

Posted On: Wednesday, April 15th, 2009
1 Star2 Stars3 Stars4 Stars5 Stars (No Ratings Yet)
Loading...

Author: ಕುಂಬ್ಳೆ ಸುಂದರ ರಾವ್, ಬಾಲಸುಬ್ರಹ್ಮಣ್ಯ ಕಂಜರ್ಪಣೆ,ಕಣ್ವತೀರ್ಥ ನಾರಾಯಣ ಭಟ್ಟ, ವಿಶ್ವನಾಥ ಸುಂಕಸಾಳ ಮತ್ತು ಕಮಲಾಕರ ಹೆಗಡೆ

ಬೆಂಗಳೂರಿನ ಲೇಖಕ ಮಹೇಶ್ ಪ್ರಭು, ಶೃಂಗೇರಿಯ ನವೀನ್ ಭಟ್ ಗಂಗೋತ್ರಿ, ಮಂಗಳೂರು ಕರ್ನಾಟಕ ವಿಕಾಸ ಬ್ಯಾಂಕ್ ಶಾಖೆಯ ನಾರಾಯಣ ಯಾಜಿ ಶುಭ ಹಾರೈಸಿ ಪ್ರತಿಕ್ರಿಯಿಸಿದ್ದಾರೆ.
* * *           * * *
ಮಂಟಪರು ನಡೆದು ಬಂದ ದಾರಿ, ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸ ಮಾಡಿದ ಶತಾವಧಾನಿ ಡಾ. ಆರ್. ಗಣೇಶ್‌ರ ಮಾರ್ಗದರ್ಶನದ ಕುರಿತಾಗಿ ಮೂಡಿ ಬಂದ ಸಂದರ್ಶನ ಉತ್ತಮ. ಪುರಾಣ ಗರ್ಭದಲ್ಲಿರುವ ಅನರ್ಘ್ಯ ರತ್ನಗಳಿಗೆ ರೂಪ ಕೊಟ್ಟು ಪ್ರದರ್ಶಿಸುವ ಅವರ ಅಭಿನಯ ನಿಜಕ್ಕೂ ಆಹ್ಲಾದ ; ಆನಂದ ಸೃಷ್ಠಿ.
‘ಹುಡುಕಿ ಬಂದಿತ್ತು ಧ್ವನಿಯುಳ್ಳ ನೂಪುರ
ಪ್ರತಿ ಸಂಚಿಕೆಯಲ್ಲೂ  ದರ್ಶಿಸಿದೆ ಆ ಗೋಪುರ’

– ಕುಂಬ್ಳೆ ಸುಂದರ ರಾವ್, ಅಧ್ಯಕ್ಷರು,
ರಾಜ್ಯ ಯಕ್ಷಗಾನ ಅಕಾಡೆಮಿ, ಬೆಂಗಳೂರು.

ವಾರ್ಷಿಕ ಸಂಚಿಕೆ ಬಹಳ ಚೆನ್ನಾಗಿ ಬಂದಿದೆ. ಮಂಟಪರ ಸಂದರ್ಶನ ಬಹಳ ಹಿಡಿಸಿತು. ಜೊತೆಗೆ ಕೆರೆಮನೆ ಶಂಭು ಹೆಗಡೆಯವರ ಕುರಿತ ನುಡಿ ನಮನ ಕೂಡಾ ಚೆನ್ನಾಗಿ ಮೂಡಿ ಬಂದಿತ್ತು. ಇಂತಹ ಸದಭಿರುಚಿಯ ಪತ್ರಿಕೆಯನ್ನು ನೀವ್ಯಾಕೆ ಘನ ಸರ್ಕಾರದ ಮೂಲಕವಾಗಿ ಕರ್ನಾಟಕದ ಶೈಕ್ಷಣಿಕ ಸಂಸ್ಥೆ, ಶಾಲೆ-ಕಾಲೇಜುಗಳಿಗೆ ಕಳಿಸಿಕೊಡುವಂತೆ ಮಾಡಿ ಇನ್ನಷ್ಟು ಅರಿವನ್ನು ಕೊಡುವ ಪ್ರಯತ್ನ ಮಾಡಬಾರದು? ಈ ಕುರಿತು ಪ್ರಯತ್ನಿಸಿ. ಶುಭವಾಗಲಿ ನಿಮಗೂ ನಿಮ್ಮ ಬಳಗಕ್ಕೂ.

– ಬಾಲಸುಬ್ರಹ್ಮಣ್ಯ ಕಂಜರ್ಪಣೆ
ನ್ಯಾಯವಾದಿಗಳು, ಸಾಹಿತಿ ಮತ್ತು
ಅಂಕಣಕಾರರು, ಮಡಿಕೇರಿ.

(ಧನ್ಯವಾದಗಳು. ನಿಮ್ಮ ಸಲಹೆ ಉತ್ತಮವಾಗಿದೆ. ನಾವು ಪ್ರಯತ್ನಿಸುತ್ತೇವೆ. ಈ ಕುರಿತಂತೆ ನಮ್ಮ ಜೊತೆಗೆ ಕೈಜೋಡಿಸುವ ಒಂದಷ್ಟು ಸಹೃದಯರ ಸಹಕಾರ ಅವಶ್ಯಕತೆಯಿದೆ. ಅವರ ನಿರೀಕ್ಷೆಯಲ್ಲಿದ್ದೇವೆ.
ಸಂಪಾದಕೀಯ ಮಂಡಳಿ )

ಸನಾತನ ನಾಟ್ಯಾಲಯದಲ್ಲಿ ಫೆಬ್ರವರಿ ೧೩, ೨೦೦೯ ರಂದು ನಡೆದ ನೂಪುರ ಭ್ರಮರಿಯ ಅನಾವರಣ ತುಂಬಾ ಮೆಚ್ಚುಗೆಯಾಯಿತು. ಸಂಚಿಕೆ ಸಂತೋಷ ಕೊಟ್ಟಿದೆ. ಅಂದವಾಗಿದೆ, ಚೆಂದವಾಗಿದೆ. ವಿಷಯ, ವಿವರ, ಬರೆಹ ಉತ್ತಮವಾಗಿತ್ತು. ಕಲಾತಪಸ್ವಿಗಳೂ, ಆತ್ಮೀಯರೂ ಆದ ಮಂಟಪ ಪ್ರಭಾಕರ ಉಪಾಧ್ಯಾಯರ ಸಂದರ್ಶನ, ಮಾಹಿತಿ ದರ್ಶನ ಭ್ರಮರಿಯ ಮೂಲಕ ಬಹಳ ಉತ್ತಮವಾಗಿ ಮೂಡಿಬಂದಿದೆ. ಅಭಿನಂದನೆಗಳು. ಅಭಿವಂದನೆಗಳು. ಕೀರ್ತಿ-ಯಶಸ್ಸು ಒಟ್ಟಿಗೆ ಬರುತ್ತಿರಲಿ.

– ಕಣ್ವತೀರ್ಥ ನಾರಾಯಣ ಭಟ್ಟ, ರಾಜಾಜಿನಗರ, ಬೆಂಗಳೂರು.

ನೂಪುರ ಭ್ರಮರಿ ಒಂದು ಮಾಹಿತಿಪೂರ್ಣ ಸಂಗ್ರಾಹ್ಯ ಪತ್ರಿಕೆ. ಕಲಾಪ್ರಿಯರಿಗೆ ನಿಜಕ್ಕೂ ಸೂಪರ್ ಎನಿಸುವ ಪತ್ರಿಕೆ.

– ವಿಶ್ವನಾಥ ಸುಂಕಸಾಳ ಮತ್ತು ಕಮಲಾಕರ ಹೆಗಡೆ, ಬೆಂಗಳೂರು

Leave a Reply

*

code