ಅಂಕಣಗಳು

Subscribe


 

ಸಂಚಿಕೆ ೫, ಸಂಪುಟ ೨

Posted On: Wednesday, October 15th, 2008
1 Star2 Stars3 Stars4 Stars5 Stars (No Ratings Yet)
Loading...

Author: ಮನೋರಮಾ. ಬಿ.ಎನ್

ಮಂಜೀರದಲ್ಲಿ ತಿಳಿಸಿದಂತೆ ಭಾರತಕ್ಕೆ
ಲಲಿತಕಲೆಗಳ ಸಾಂಪ್ರದಾಯಿಕ ಗುರುಪರಂಪರೆ ಯೊಂದಿಗೆ
ಕಾಲಘಟ್ಟದ ಡಿಗ್ರಿ, ಸರ್ಟಿಫಿಕೇಟುಗಳ
ಮಾನ್ಯತೆಯೂ ಬೇಕು ಎಂಬುದು ನನ್ನ ಅಭಿಪ್ರಾಯ.
ಚೂರ್ಣಿಕೆ ಸಂಸ್ಕೃತದಲ್ಲಿ ಮಾತ್ರವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ದೇವರ,
ಆಶ್ರಯದಾತರ ಹೊಗಳಿಕೆಯಾಗಿ; ವೈಷ್ಣವಿ ಎನ್. ಅವರು ಹೇಳಿದ ಸಂದರ್ಭಗಳಲ್ಲಿಯೂ
ರೂಢಿಯಲ್ಲಿವೆ. ವಚನಗಳೂ ಪದ್ಯಗಂಧಿ ಗದ್ಯ ಸಾಹಿತ್ಯ.
ರಾಗ, ತಾಳ, ಸಂಗೀತ ಅಳವಡಿಸಿ, ಜೀವನದ ಹಲವು ಅನುಭವ ಗಳನ್ನು
ನೃತ್ಯಗಾರರು ಅಭಿನಯಿಸುತ್ತಾರೆ. ಇದು ವೈಜಯಂತಿ ಕಾಶಿ ಅವರು
ಹೇಳಿದಂತೆ ಕಲಾವಿದರು ಬೆಳೆಸಿಕೊಳ್ಳುವ ಆಯಾಮಗಳು.
ಮುದ್ರೆಗಳ ಲಕ್ಷಣವನ್ನು ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿ, ವಿಸ್ತರಿಸಿ ಹೆಚ್ಚಿನ
ಓದಿಗೆ-ತಿಳಿವಳಿಕೆಗೆ ದಾರಿಯಾಗುತ್ತದೆ ತಮ್ಮ ಕೊಡುಗೆ.
ಪುಂಡರೀಕ ವಿಠಲನ ಸಂಗೀತ ನೃತ್ಯಗ್ರಂಥಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ರಾ.
ಸತ್ಯನಾರಾಯಣರು ಅನುವಾದ, ವ್ಯಾಖ್ಯಾನ ಮಾಡಿ _ಪುಂಡರೀಕ ಮಾಲಾ_ ಎಂಬ ಹೆಸರಿನಲ್ಲಿOK
ಕನ್ನಡ ಮತ್ತು ಸಂಸ್ಕೃತ ನಿರ್ದೇಶನಾಲಯದ ವತಿಯಿಂದ ೧೯೮೬ರಲ್ಲಿ ಪ್ರಕಟವಾಗಿದೆ,
ಎಂಬ ಸಮಾಚಾರ ಓದುವ ಮಂದಿಗೆ ಮುಖ್ಯವಾಗಿದೆ.
ಏರ್ಯ ಲಕ್ಷ್ಮೀನಾರಾಯಣ ಆಳ್ವರ _ಮುಗಿಲು ನಾಟ್ಯವಾಡಿತು_ ಕವನವು ವರ್ಷ
ಋತುವಿನ ಸಂಚಿಕೆಗೆ, ಋತುವಿನ ಸಂದರ್ಭಕ್ಕೆ ಬಹಳ ಸೂಕ್ತವಾಗಿ ಹೊಂದಿತ್ತು.

ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ
ವಿಶ್ವಕಲಾನಿಕೇತನ, ಪುತ್ತೂರು, ದ.ಕ

Leave a Reply

*

code